ಆಗ್ರಯಣೇಷ್ಟಿ

ಹೊಲಗಳಲ್ಲಿ ಬೆಳೆದ ಮೊದಲ ಫಲವನ್ನು ಉಪಯೋಗಿಸುವ ಮುನ್ನ ಆಹಿತಾಗ್ನಿಯಾದ ಗೃಹಸ್ಥ ಮಾಡಬೇಕಾದ ಶ್ರೌತಕರ್ಮಕ್ಕೆ ಆಗ್ರಯಣ ಇಷ್ಟಿಯೆಂದು ಹೆಸರು. ಶರದೃತುವಿನಲ್ಲಿ ಭತ್ತ, ವಸಂತದಲ್ಲಿ ಯವ ಇವು ಹೋಮದ್ರವ್ಯಗಳು. ಈ ಕರ್ಮಕ್ಕೆ ಸೋಮನೇ ದೇವತೆ. ಇವು ಬೇರೆ ಬೇರೆ ಋತುಗಳಲ್ಲಿ ಬೇರೆ ಬೇರೆ ದ್ರವ್ಯಗಳಿಂದಲೂ ಬೇರೆ ಬೇರೆ ದೇವತೆಗಳನ್ನುದ್ದೇಶಿಸಿಯೂ ನಡೆಯಬಹುದಾಗಿದೆ. ಈ ಇಷ್ಟಿಗಳೆಲ್ಲ ಪ್ರಾಯಃ ದರ್ಶಪೂರ್ಣಮಾಸದ ವಿಕೃತಿಗಳೇ ಎನ್ನಬಹುದು.			
(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ